ಆಂಗ್ಲಿಯೊಲಿರಿ, ಕೆಕೋ
 	
(1260-1312). ಇಟಲಿಯ ಕವಿ. ಈತನ ಅಷ್ಟಷಟ್ಪದಿಗಳಿಂದ (ಸಾನೆಟ್) ಇವನ ಕಷ್ಟಕಾರ್ಪಣ್ಯದ ಚಿತ್ರ ದೊರೆಯುತ್ತದೆ. ಶ್ರೀಮಂತ ಮನೆತನದಲ್ಲಿ ಹುಟ್ಟಿದರೂ ತನ್ನನ್ನು ನಿರ್ಗತಿಕನಂತೆ ಸಾಕಿದ ಜಿಪುಣ ತಂದೆ ತಾಯಿಗಳನ್ನು ತನ್ನ ಕವನಗಳಲ್ಲಿ ಶಪಿಸುತ್ತಾನೆ. ಇವನ ಒರಟು ಶೈಲಿಯ ಕವನಗಳಲ್ಲಿ ಕಟುವಾದ ಹಾಸ್ಯವಿದೆ. ಮಾತಿನಲ್ಲಿ ಚಾತುರ್ಯ, ವಿಡಂಬನೆ ಎದ್ದು ತೋರುತ್ತದೆ. ಮೂರು ಕವನಗಳಲ್ಲಿ ದಾಂಟೆಯನ್ನು ಅಗೌರವದಿಂದ ಸಂಬೋಧಿಸಿದ್ದಾನೆ.          				
(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ